Thursday, June 18, 2009

ದೀಪ

ಮತ್ತೊಂದು ಹೊಸ ದಿನ ಮತ್ತೊಂದು ಹೊಸ ಪಯಣ

ಮತ್ತೊಂದು ಹೊಸ ಕಣ್ಣೀರು ಮತ್ತೊಂದು ಹೊಸ ಮುಗುಳ್ನಗೆ

ಮತ್ತದೇ ಸಂಜೆ ಮತ್ತದೇ ರಾತ್ರಿ

ಮತ್ತದೇ ಬೆಳಕು ಮತ್ತದೇ ಕತ್ತಲು

ಕ್ಷಣಿಕ ಸತ್ಯಗಳಲ್ಲಿ ಅರ್ಥ ಹುಡುಕುವುದೀಕೆ?



ಸುತ್ತಲೆಲ್ಲಾ ಕತ್ತಲು ತುಂಬಿರುವಾಗ ಕಣ್ಮುಚ್ಚಿ ಮನಸ್ಸಿನೊಳಗೆ ಇಣುಕಿ ನೋಡಿದೆ
ಮನದ ಮೂಲೆಯಲ್ಲಿ ಒಂದು ದೀಪ ಉರಿಯುತ್ತಿತ್ತು
ಅದರ ಬೆಳಕು ಪ್ರಖಾರವಾಗಿರದೆ ಇದ್ದರು ಬೆಚ್ಚಗಿತ್ತು
ಕತ್ತಲು ಕ್ರಮೇಣವಾಗಿ ಮಾಯವಾಯ್ತು
ಬೆಚ್ಚನೆಯ ನಗುವೊಂದು ಮುಖದಿ ಮೂಡಿತ್ತು
ದೀಪ ಹಚ್ಚಿ ಇಟ್ಟಿರುವ ನಿನಗೆ ಅಭಿನಂದನೆಗಳು!!!

No comments:

Post a Comment